ಹುಟ್ಟು ಸಾವಿನ ನಡುವಿನ ಅವಧಿ ಯ ಹಾಡು ಬಿಡುಗಡೆ
Posted date: 11 Thu, Feb 2016 – 11:31:43 AM

ಕನ್ನಡ ಹಾಗೂ ತೆಲುಗು ಸೇರಿದಂತೆ ೨ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಚಿತ್ರ ಅವಧಿ. ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು.  ದೇವರ ಸೃಷ್ಟಿಯಲ್ಲಿ ಮನಷ್ಯನ ಆಟ ಏನೂ ನಡೆಯದು.  ಹುಟ್ಟು ಸಾವಿನ ನಡುವೆ ನಡೆಯುವಂಥಾ ಗೇಮ್ ಪ್ಲಾನ್ ಇದು.  ಅವಧಿ ಚಿತ್ರದ ಕಥಾ ಹಂದರ. ಕಥನಂ ಎಂದು ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಾಯಿಕಿರಣ್ ಮುಕಮಲ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.  ರಂಜಿತ್-ಅರ್ಚನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ನಾಯಕನಿಗೆ ಚಿತ್ರದಲ್ಲಿ ೩ ಗೆಟಪ್ ಇದೆ.  ವಿದ್ಯಾರ್ಥಿ ಅಲ್ಲದೆ ಕುರುಡ ಹಾಗೂ ಒಬ್ಬ ಸಾಮಾನ್ಯ ವ್ಯಕ್ತಿಯಾಗಿಯೂ ಕಾಣಿಸಿಕೊಂಡಿದ್ದಾರೆ.

    ನಾಯಕಿ ಅರ್ಚನಾಗೆ ಇದು ೨ನೇ ಚಿತ್ರ ಪ್ರಿಯಾ ಹೆಸರಿನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದು ನಾಯಕ ಸಂಕಷ್ಟಗಳಲ್ಲಿ ಸಿಕ್ಕಿಹಾಕಿಕೊಂಡಾಗಿ ಒಬ್ಬ ಗೆಳತಿಯಾಗಿ ಆತನನ್ನು ಕಾಪಾಡುತ್ತಾನೆ.  ಒಂದು ಸಮಯದಲ್ಲಿ ನಾಯಕನ ಮನದಾಳದ ತೊಳಲಾಟಗಳು ಹಾಗೂ ಆತಂಕಗಳಿಂದ ದೂರ ಮಾಡಿ ಹೇಗೆ ರಕ್ಷಿಸುತ್ತೇನೆ ಎಂಬುದೇ ನನ್ನ ಪಾತ್ರದ ವೈಶಿಷ್ಟ್ಯತೆ ಎಂದು ಹೇಳಿಕೊಂಡರು.

    ಹಿರಿಯ ನಟ ರಮೇಶ್ ಭಟ್ ಈ ಚಿತ್ರದಲ್ಲಿ ಒಬ್ಬ ನಾಟಿ ವೈದ್ಯನಾಗಿ ಕಾಣಿಸಿಕೊಂಡಿದ್ದಾರೆ ಬಹುತೇಕ ಎಲ್ಲಾ ವಿದ್ಯಾವಂತರೇ ಸೇರಿ ಮಾಡಿರುವ ಚಿತ್ರವಿದು.  ಈ ಚಿತ್ರ ತಂಡದಲ್ಲಿ ಒಂದು ಶ್ರದ್ಧೆ ಇದೆ ಎಂದು ಹೇಳಿದರು.  ಈ ಚಿತ್ರದಲ್ಲಿ ಒಟ್ಟು ೪ ಹಾಡುಗಳಿದ್ದು ಸಾಬು ವರ್ಗೀಸ್  ಸಂಗೀತ ಸಂಯೋಜನೆ ಮಾಡಿದ್ದಾರೆ.  ಅರಸು ಅಂತಾರೆ ಚಿತ್ರದ ೪ ಹಾಡುಗಳಿಗೆ ಸಾಹಿತ್ಯ ರಚನೆ ಮಾಡಿದ್ದಾರೆ.  ಅನುರಾಧ ಭಟ್, ಸಂತೋಷ್ ಹಾಗೂ ಚಿಂತನ್ ವಿಕಾಸ್ ಹಾಡಿದ್ದಾರೆ.  ಸದ್ಯ ಈ ಚಿತ್ರವು ಸೆನ್ಸಾರ್ ಮಂಡಳಿ ಮುಂದೆ ಹೋಗಲು ಸಿದ್ದವಿದ್ದು ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.  ಕನ್ನಡದ ಅವಧಿ ಯನ್ನು ಮೊದಲು ರಿಲೀಸ್ ಮಾಡಿ ನಂತರ ತೆಲುಗಿನ ಕಥನಂ ಚಿತ್ರವನ್ನು ರಿಲೀಸ್ ಮಾಡುವುದಾಗಿ ನಿರ್ಮಾಪಕ ಹಾಗೂ ನಿರ್ದೇಶಕರಾದ ಸಾಯಿ ಕಿರಣ್ ಮುಖಮಲ ಅವರು ತಿಳಿಸಿದ್ದಾರೆ.  ಸುನಿಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed